ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು, ತುಮಕೂರು: ನಾವು ಮಾಡುವ ಕಾಯಕದಲ್ಲಿ ಪ್ರಾಮಾಣಿಕತೆ, ಹೆಮ್ಮೆ ಮತ್ತು ಗೌರವ ಇರಬೇಕು. ಆಗ ಮಾತ್ರ ಆತ್ಮತೃಪ್ತಿ ಸಾಧ್ಯ ಎಂದು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಹಾರಾಜ್ ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯ ಮತ್ತು ತುಮಕೂರು ಎಚ್.ಆರ್. ಫೋರಮ್ (ಮಾನವ ಸಂಪನ್ಮೂಲ ವೇದಿಕೆ) ಮಾನವ ಸಂಪನ್ಮೂಲ ವೃತ್ತಿಪರರು ಮತ್ತು ಕಾರ್ಖಾನೆ ಅಧಿಕಾರಿಗಳಿಗಾಗಿ ಬುಧವಾರ ಆಯೋಜಿಸಿದ್ದ ಸಂವಾದ ಗೋಷ್ಠಿ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾಡಿನ ಬಗ್ಗೆ ಸಮಾಜದ ಒಳಿತನ್ನು ಬಯಸುವವರನ್ನು ಮಾನವ ಸಂಪನ್ಮೂಲ ವ್ಯಕ್ತಿ ಎನ್ನಬಹುದು. ಸೋಲನ್ನು ಸ್ಪೂರ್ತಿಯಾಗಿ ಸ್ವೀಕರಿಸಬೇಕು. ನಾವು ಮಾಡುವ ಕೆಲಸದಲ್ಲಿ ನಮಗೆ ಸಂತೋಷ ಇರಬೇಕು. ಖುಷಿಯಿಂದ ಕೆಲಸ ಮಾಡಿದಾಗ ಯಾವ ಕೆಲಸವಾದರೂ ಸಂತೋಷವನ್ನು ನೀಡುತ್ತದೆ. ಸಹಾಯವನ್ನು ಶ್ರೀಮಂತಿಕೆಯಿAದ ಮಾಡದೆ ಹೃದಯವಂತಿಕೆಯಿAದ ಮಾಡಬೇಕು ಎಂದರು.ಕಾರ್ಖಾನೆಗಳ ಇಲಾಖೆಯ ನಿವೃತ್ತ ಗೆಜೆಟೆಡ್ ಮ್ಯಾನೇಜರ್ ಎಂ. ಸಿ. ನರಸಿಂಹಮೂರ್ತಿ ಮಾತನಾಡಿ, ಭಾವೈಕ್ಯತೆ ಮತ್ತು ಮಾನವೀಯತೆ ಎಲ್ಲಿ ಸಮೃದ್ಧವಾಗಿ ಇರುತ್ತದೋ ಆ ಜಾಗ ಸಂತೋಷದಿAದ ಕೂಡಿರುತ್ತದೆ. ನಮ್ಮವರಿಗೆ ಮತ್ತು ನಮ್ಮ ಅಂತರAಗಕ್ಕೆ ನೀವು ಒಳ್ಳೆಯವರಾಗಿರಬೇಕು. ಭಾವ, ಬದುಕು ಮತ್ತು ಭಗವಂತನ ಬಗ್ಗೆ ಯಾರಿಗೆ ಗೌರವ ಇರುತ್ತದೆಯೋ ಅವರು ಉತ್ತಮ ಎಚ್.ಆರ್. ಆಗುತ್ತಾರೆ ಎಂದು ತಿಳಿಸಿದರು.ಬೆಂಗಳೂರಿನ ಬಾಯ್ಲರ್ಸ್ ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆ ಕಾರ್ಖಾನೆಗಳ ಜಂಟೀ ನಿರ್ದೇಶಕ ಆರ್. ಕೆ. ಪಾರ್ಥಸಾರಥಿ ಮಾತನಾಡಿ, ಮಹಿಳೆಯರಿಂದ ಕಂಪನಿಗಳಲ್ಲಿ ಹೆಚ್ಚಿನ ಸಮಯ ಕೆಲಸ ಮಾಡಿಸಿಕೊಳ್ಳುವುದಕ್ಕೆ ಅವರಿಗೆ ಹೆಚ್ಚಿನ ಸೌಲಭ್ಯಗಳನ್ನು ನೀಡಬೇಕು ಎಂದು ಸೆಕ್ಷನ್ ೬೬ರಲ್ಲಿ ಅವಕಾಶ ನೀಡಲಾಗಿದೆ. ಕರ್ನಾಟಕ ಸರ್ಕಾರ ಸೆಕ್ಷನ್ ೫೪ರ ಪ್ರಕಾರ ೧೨ ಗಂಟೆ, ಸೆಕ್ಷನ್ ಇಂಟ್ರುವೆಲ್ ಆಫ್ ರೆಸ್ಟ್ ಎಂದು ಸರ್ಕಾರ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜûಮ್ ಜûಮ್, ತುಮಕೂರು ಬಾಯ್ಲರ್ಸ್ ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆ ಕಾರ್ಖಾನೆಗಳ ಉಪನಿರ್ದೇಶಕ ಕೆ. ಎಸ್. ಕೃಷ್ಣಪ್ಪ, ತುಮಕೂರು ಪ್ರಾದೇಶಿಕ ಪಿಎಫ್ ಕಮಿಷನರ್ ಶಾಲಾಬ್ ದುಬೆ, ತುಮಕೂರು ಎಚ್.ಆರ್. ಫೋರಮ್ನ ಅಧ್ಯಕ್ಷ ಗೋವಿಂದರಾಜು ಎನ್. ಎಸ್, ಉಪಾಧ್ಯಕ್ಷ ಪ್ರೊ. ಕೆ. ಜಿ. ಪರಶುರಾಮ್, ಕಾರ್ಯದರ್ಶಿ ಚಿದಾನಂದ ಎಲ್. ಆರ್., ಕೋಶಾಧಿಕಾರಿ ಮಂಜುನಾಥ ನಾಯಕ್, ಶ್ರೀನಿಧಿ, ಪಾಂಡುರAಗ ಭಾಗವಹಿಸಿದ್ದರು.



