ಈಗಾಗಲೇ ಇ-ಆಫೀಸ್ ಅನುಸ್ಠಾನಗೊಂಡಿರುವ ಕಚೇರಿಗಳು, ಇ-ಆಫೀಸ್ ಮೂಲಕ ಕಡತಗಳ ಕಡ್ಡಾಯವಾಗಿ ಸಲ್ಲಿಸಬೇಕು ಇದರಿಂದ ನಿಗದಿತ ಸಮಯದಲ್ಲಿ ಕಡತಗಳು ಇತ್ಯರ್ಥವಾಗಿ ಅನುಕೂಲವಾಗಲಿದೆ ಎಂದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬಾಕಿ ಇರುವ ಭೂಮಿಗೆ ಸಂಬAಧಿಸಿದ ಪ್ರಕರಣಗಳಿಗೆ ಶೀಘ್ರ ಪರಿಹಾರ ಒದಗಿಸಿ, ವಿಲೇವಾರಿ ಮಾಡಬೇಕು, ಗೃಹ ನಿರ್ಮಾಣದ ಹಂತಗಳಲ್ಲಿ ಬಾಕಿ ಇರುವ ಜಿ.ಪಿ.ಎಸ್.ನ್ನು ಪೂರ್ಣಗೊಳಿಸಬೇಕು, ಭೌತಿಕ ವರದಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಅವರು ಮಾತನಾಡಿ, ಜಿಲ್ಲಾ ವ್ಯಾಪ್ತಿಯಲ್ಲಿ ಆಶ್ರಯ ಯೋಜನೆಯಡಿ ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ಕನಿಷ್ಠ ೫೦೦೦ ಮನೆಗಳ ನಿರ್ಮಿಸಲಾಗುವುದು, ತಹಸೀಲ್ದಾರ್ ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಇನ್ನೂ ಒಂದು ತಿಂಗಳೊಳಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜಾಗ ಗುರುತಿಸಬೇಕು ಎಂದು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್, ಜಿಲ್ಲಾ ಕಾರ್ಮಿಕಾಧಿಕಾರಿ ರಮೇಶ್. ಎಡಿಎಲ್ಆರ್ ಶಿವಶಂಕರ್, ಶಿರಸ್ತೆದಾರ ಎನ್.ನರಸಿಂಹರಾಜು ಸೇರಿದಂತೆ ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿಗಳು, ತಹಸೀಲ್ದಾರ್ಗಳು, ಕಾರ್ಯನಿರ್ವಹಣಾಧಿಕಾರಿಗಳು, ಭೂಸ್ವಾಧೀನಾಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಇ-ಕಚೇರಿ ಮುಖೇನೆ ಕಡತಗಳ ಸಲ್ಲಿಕೆ ಸೂಚನೆ

Leave a comment
Leave a comment


