ಅಫಜಲಪುರ ತಾಲೂಕಿನ ತಹಸೀಲ್ದಾರ ಕಛೇರಿಯಲ್ಲಿ ನುಲಿಯ ಚಂದಯ್ಯನವರ 917 ನೆಯ ಜಯಂತೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು,ಕಾರ್ಯಕ್ರಮವನ್ನು ಸಂಜೀವ ಕುಮಾರ ದಾಸರ ತಾಲೂಕಾ ತಹಸೀಲ್ದಾರ ಅವರು ನುಲಿಯ ಚಂದಯ್ಯ ನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಬಸವಾದಿ ಶರಣರಲ್ಲಿ ನಮ್ಮ ನುಲಿಯ ಚಂದಯ್ಯ ಕೂಡ ಶ್ರೇಷ್ಠ ಶರಣರು. ಅವರ ಆದರ್ಶ ಬದುಕು ನಮ್ಮೆಲ್ಲರಿಗೂ ಮಾರ್ಗದರ್ಶನ ಹಾಗೂ ಮಾದರಿಯಾಗಿ ಇರಲಿ ನಾವೆಲ್ಲರೂ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡಿಯೋಣ ಎಂದರು, ಇದೆ ಸಂದರ್ಭದಲ್ಲಿ ಸಂಜೀವಕುಮಾರ ದಾಸರ ಅವರಿಗೆ ರಕ್ಷಾಬಂಧನ ಪ್ರಯುಕ್ತ ಕೈಗೆ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಲಾಯಿತು. ನಂತರ ಅಫಲಪುರ ತಾಲೂಕಿನ ಕೊರಮ ಅಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಅಧ್ಯಕ್ಷರಾಗಿ ಶಿವಣ್ಣ ಬಿ ಭಜೇಂತ್ರಿ ಹಾಗೂ ಕಾರ್ಯದರ್ಶಿಯಾಗಿ ಯಲ್ಲಾಲಿಂಗ ಭಜೇಂತ್ರಿ, ಉಪಾಧ್ಯಕ್ಷರಾಗಿ ಬಸವರಾಜ ಭಜೇಂತ್ರಿ,ಗಂಗಪ್ಪ ಭಜೇಂತ್ರಿ,ಯವರನ್ನು ಆಯ್ಕೆ ಮಾಡಲಾಯಿತು.ಹಾಗೂ ನೂತನವಾಗಿ ಆಯ್ಕೆಯಾದ ಎಲ್ಲ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿ.
ಈ ಸಂದರ್ಭದಲ್ಲಿ ಹಣಮಂತ ಭಜೇಂತ್ರಿ ನೂತನ ಅಧ್ಯಕ್ಷ ಶಿವಣ್ಣ ಬಿ,ಭಜೇಂತ್ರಿ. ಬಸವರಾಜ ಭಜೇಂತ್ರಿ ಉಪಾಧ್ಯಕ್ಷರು.ಗಂಗಪ್ಪ ಭಜೇಂತ್ರಿ ಘತ್ತರಗಿ ಉಪಾಧ್ಯಕ್ಷರು.ಯಲ್ಲಾಲಿಂಗ ಭಜೇಂತ್ರಿ ಪ್ರಧಾನ ಕಾರ್ಯದರ್ಶಿ.ಸಿದ್ದು ಭಜೇಂತ್ರಿ ಖಜಾಂಚಿ.ಮಹಾಂತೇಶ ಭಜೇಂತ್ರಿ ಭೈರಾಮಡಗಿ. ಚೌಡಪ್ಪ ಭಜೇಂತ್ರಿ ಜಂಟಿ ಕಾರ್ಯದರ್ಶಿ.ಲಕ್ಷ್ಮಿಕಾಂತ ಭಜೇಂತ್ರಿ ಸಂಜು ಕುಮಾರ ಗಾಣಗಾಪುರ.ಸಿದ್ದು ಆತನೂರ ಸದಸ್ಯರು. ಸಿದ್ದರಾಮ ಮಾನೆ ಅಫಜಲಪೂರ. ಸಿದ್ದರಾಮ ಭಜೇಂತ್ರಿ ಮಣ್ಣೂರ,ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.