ಮಲ್ಲಸಂದ್ರ:ಮಲ್ಲಸಂದ್ರ ಗ್ರಾಮಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಹಬ್ಬತ್ತನಹಳ್ಳಿ ಮಂಜುಮ್ಮ ಅಧ್ಯಕ್ಷರಾಗಿ,ಕೊತ್ತಿಹಳ್ಳಿ ಗಿರೀಶ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಅಧ್ಯಕ್ಷ ಸ್ಥಾನ ಎಸ್.ಸಿ. ಮಹಿಳೆಗೆ,ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ಹಬ್ಬತ್ತನಹಳ್ಳಿ ಮಂಜುಮ್ಮ ವಿರುದ್ದ ಹಾಲುನೂರು ದುಶ್ಯಂತಮಣಿ ಸ್ಪರ್ಧಿಸಿದ್ದರೆ,ಉಪಾಧ್ಯಕ್ಷ ಸ್ಥಾನಕ್ಕೆ ಹಬ್ಬತ್ತನಹಳ್ಳಿಯ ಎಂ.ಆರ್.ಮಂಜುನಾಥ್ ಸ್ಪರ್ಧೆ ಮಾಡಿದ್ದರು.
ಮಲ್ಲಸಂದ್ರ ಗ್ರಾ.ಪಂನಲ್ಲಿ 22 ಸದಸ್ಯರಿದ್ದು,ಮಂಜಮ್ಮ ಪರ 13 ಮತಗಳು ಚಲಾವಣೆಯಾಗಿದ್ದು,ದುಶ್ಯಂತಮಣಿ ಪರ 08 ಮತಗಳು ಚಲಾವಣೆಯಾಗಿದ್ದು,ಒಂದು ಮತ ತಿರಸ್ಕೃತಗೊಂಡಿತ್ತು. ಉಪಾಧ್ಯಕ್ಷ ಸ್ಥಾನದಲ್ಲಿ ಗಿರೀಶ್ 13 ಮತ ಪಡೆದರೆ, ಎಂ.ಆರ್. ಮಂಜುನಾಥ್ 07 ಮತಗಳನ್ನು ಪಡೆದಿದ್ದರು.
ಇದುವರೆಗೂ ನಡೆದ 11 ಗ್ರಾ.ಪಂ. ಚುನಾವಣೆಯಲ್ಲಿ 10 ರಲ್ಲಿ ಬಿಜೆಪಿ ಬೆಂಬಲಿತ ಸದಸ್ಯರುಗಳು ಅಧ್ಯಕ್ಷ-ಉಪಾಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದ್ದು,ಜೆಡಿಎಸ್ ಸಾಧನೆ ಶೂನ್ಯವಾಗಿದೆ.ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ಶಾಸಕ ಬಿ.ಸುರೇಶಗೌಡ ಶುಭ ಹಾರೈಸಿದ್ದಾರೆ.