ಕರ್ನಾಟಕ ಯುವಶಕ್ತಿ ಸಂಘಟನೆ ವತಿಯಿಂದ 68ನೇ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ನಾಮಕರಣದ 50 ನೇ ವರ್ಷದ ಸುವರ್ಣ ಸಂಭ್ರಮ, ಸಂಗೀತೋತ್ಸವ ವಿವಿಧ ಕ್ಷೇತ್ರದ ಸಾಧಕರಿಗೆ ರಾಜ್ಯೋತ್ಸವ ಶಕ್ತಿ ಪ್ರಶಸ್ತಿ ಪುರಸ್ಕಾರ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಈ ಕಾರ್ಯಕ್ರಮವು 26 ನವೆಂಬರ್ 20 23ರಂದು ಕಲಬುರ್ಗಿಯ ಎಸ್.ಎಂ ಪಂಡಿತ್ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ನಮ್ಮ ಸಿನಿಮಾ ಗರುಡ ಪುರಾಣ ತಂಡ ಕಲಾವಿದರು ಆಗಮಿಸುತ್ತಿದ್ದಾರೆ .ಆದ ಕಾರಣ ಸಮಸ್ತ ಕನ್ನಡ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಂಘಟನೆ ರಾಜ್ಯಾಧ್ಯಕ್ಷರಾದ ಅವ್ವಣ್ಣಗೌಡ ಪಾಟೀಲ್ ಮನವಿ ಮಾಡಿಕೊಂಡಿರು.