ಸಂಚಾರಿ ಇ-ಚಲನ್ ದಂಡದ ಮೊತ್ತಕ್ಕೆ ಶೇ ೫೦% ರಿಯಾಯಿತಿ -ನ್ಯಾ.ನೂರುನ್ನೀಸತುಮಕೂರು: ಪೊಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್ಗಳಲ್ಲಿ ೧೧ ಫೆಬ್ರುವರಿ ೨೦೨೩ ರೊಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಇ-ಚಲನ್ನಲ್ಲಿ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ ಮತ್ತೊಂದು ಬಾರಿಗೆ ಶೇಕಡಾ ೫೦ರಷ್ಟು ರಿಯಾಯಿತಿ ನೀಡಿ ಆದೇಶಿಸಲಾಗಿದೆ ಎಂದು ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ನೂರುನ್ನೀಸರವರು ತಿಳಿಸಿದರು.ಅವರು ಇಂದು ಜಿಲ್ಲಾ ನ್ಯಾಯಾಲಯದ ಕಚೇರಿಯಲ್ಲಿ ನಡೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ,ಈ ವರ್ಷದ ಮೊದಲ ಲೋಕ್ ಅದಾಲತ್ ೧೧ ಫೆಬ್ರವರಿಯಂದು ನಡೆದಿತ್ತು ಅಂದು ತುಮಕೂರಿನಲ್ಲಿ ೭೫೦ ಪ್ರಕರಣಗಳನ್ನು ಮುಕ್ತಾಯಗೊಳಿಸಿ ಸರ್ಕಾರಕ್ಕೆ ೩,೭೫,೦೦೦/- ರೂಗಳನ್ನು ದಂಡದ ಹಣವನ್ನು ಪಾವತಿ ಮಾಡಿ ಸಾರ್ವಜನಿಕರು ತಮ್ಮ ಮೇಲಿದ್ದ ಪ್ರಕರಣಗಳನ್ನು ಬಗೆಹರಿಸಿಕೊಂಡಿದ್ದರು,ಅAದು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಮತ್ತು ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಬಿ.ವೀರಪ್ಪನವರ ಮುತುವರ್ಜಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಲಕ್ಷಾಂತರ ಪ್ರಕರಣಗಳನ್ನು ಸಾರ್ವಜನಿಕರು ಶೇ.೫೦ರಷ್ಟು ದಂಡವನ್ನು ಪಾವತಿಸಿ ತಮ್ಮ ಮೇಲಿದ್ದ ಕೇಸನ್ನು ಮುಕ್ತಾಯಗೊಳಿಸಿದ್ದರು,ಅದರಂತೆ ಈಗಿನ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಮತ್ತು ಹೈಕೋರ್ಟ್ ನ್ಯಾಯಾಧೀಶರಾದ ಜಸ್ಟೀಸ್ ಜಿ.ನರೇಂದರ್ ಸಾಹೇಬರ ಮನವಿಯ ಮೇರೆಗೆ ಇಂದು ರಾಜ್ಯ ಸರ್ಕಾರ ಆದೇಶ ಸಂಖ್ಯೆ ಟಿಡಿ೨೭ಟಿಡಿಓ೨೦೨೩,ಬೆಂಗಳೂರು ದಿನಾಂಕ:೦೫-೦೭-೨೦೨೩ರAತೆ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ವಿ.ಎಸ್.ಪುಷ್ಪರವರ ಸಹಿಯೊಂದಿಗೆ ಅಧಿಸೂಚನೆ ಹೊರಡಿಸಿದ್ದು ಸ್ವಾಗತಾರ್ಹ, ಈ ರಿಯಾಯಿತಿಯು ೯ನೇ ಸೆಪ್ಟೆಂಬರ್ ೨೦೨೩ರವರೆಗೆ ಇತ್ಯರ್ಥವಾಗುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.ದಿನಾಂಕ:೦೮-೦೭-೨೦೨೩ರAದು ನಡೆಯುವ ೨ನೇ ಲೋಕ್ ಅದಾಲತ್ ನಲ್ಲಿ ತಮ್ಮ ಮೇಲಿರುವ ಪ್ರಕರಣಗಳಲ್ಲಿ ಪೋಲೀಸ್ ಇಲಾಖೆಯವರು ಹಾಕಿರುವ ಸಂಚಾರಿ ಇ-ಚಲನ್ ಮೂಲಕ ದಂಡವನ್ನು ಶೇ ೫೦% ರಷ್ಟು ಪಾವತಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಳ್ಳಬೇಕು ಇದೊಂದು ಸಾರ್ವಜನಿಕರಿಗೆ ಸುವರ್ಣಾವಕಾಶ ಎಂದು ಸಾರ್ವಜನಿಕರು ಮತ್ತು ಕಕ್ಷಿದಾರರಲ್ಲಿ ಮನವಿ ಮಾಡಿದರು.ದಿನಾಂಕ:೦೮-೦೭-೨೦೨೩ರ ಎರಡನೇ ಶನಿವಾರ ತುಮಕೂರು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ನಡೆಯುವ ೨ನೇ ರಾಷ್ಟಿçÃಯ ಲೋಕ್ ಅದಾಲತ್ ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಉಚಿತವಾಗಿ ರಾಜಿ ಪಂಚಾಯ್ತಿ ಮೂಲಕ ತಮ್ಮ ಕೇಸುಗಳನ್ನು ಇತ್ಯರ್ಥಗೊಳಿಸಿಕೊಳ್ಳಿ, ತ್ವರಿತ ಮತ್ತು ವೆಚ್ಚವಿಲ್ಲದೆ ತಮ್ಮ ಕೇಸುಗಳನ್ನು ಇತ್ಯರ್ಥಪಡಿಸಿಕೊಳ್ಳಿ ಎಂದು ಸಾರ್ವಜನಿಕರು ಮತ್ತು ಕಕ್ಷಿದಾರರಲ್ಲಿ ಮನವಿ ಮಾಡಿದರು.