ತುಮಕೂರು, ಸೆ.೧೫- ಇಲ್ಲಿನ ವಿನಾಯಕನಗರದ ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿ ವತಿಯಿಂದ ೪೭ನೇ ವರ್ಷದ ಸಿದ್ಧಿವಿನಾಯಕ ಪ್ರತಿಷ್ಠಾಪನಾ ಮಹೋತ್ಸವ ಸೆ.೧೮ ರಂದು ಸಂಜೆ ೬ ಗಂಟೆಗೆ ನಡೆಯಲಿದೆ ಎಂದು ಸಮಿತಿಯ ಉಪಾಧ್ಯಕ್ಷ ನಾಗೇಶ್ ತಿಳಿಸಿದರು.
ಇಂದು ಬೆಳಿಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ೩೦ ದಿನಗಳ ಕಾಲ ನಡೆಯುವ ಗಣೇಶೋತ್ಸವ ಸಮಾರಂಭದಲ್ಲಿ ೩೦ ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಗಳು, ವಿವಿಧ ಸ್ಪರ್ಧೆಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಸಿದ್ಧಗAಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯುವ ಸಮಾರಂಭವನ್ನು ಹಿರೇಮಠ ಅಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಭಕ್ತರ್ಮಾಂಡೇಯ ಅಥವಾ ಸಿದ್ಧಿವಿನಾಯಕ ವೈಭವ ದೃಶ್ಯಾವಳಿಯನ್ನು ಗೃಹಸಚಿವ ಡಾ. ಜಿ.ಪರಮೇಶ್ವರ್ ಉದ್ಘಾಟಿಸುವರು. ಮಂಡಳಿ ಅಧ್ಯಕ್ಷ ಜಿ.ಹೆಚ್.ಪರಮಶಿವಯ್ಯ ಅಧ್ಯಕ್ಷತೆ ವಹಿಸುವರು. ಸಂಸದ ಜಿ.ಎಸ್. ಬಸವರಾಜು, ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಮೇಯರ್ ಪ್ರಭಾವತಿ ಸುಧೀಶ್ವರ್, ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಎಸ್ಪಿ ಕೆ.ವಿ. ಅಶೋಕ್ ಇವರು ಮುಖ್ಯ ಅತಿಥಿಗಳಾಗಿ ರುವರು. ಪಾಲಿಕೆ ಸದಸ್ಯೆ ನಾಸಿರಾಬಾನು, ಬೆಸ್ಕಾಂ ಮುಖ್ಯ ಅಭಿಯಂತರ ಕೆ.ಜಿ. ಗೋವಿಂದಪ್ಪ, ಟೂಡಾ ಆಯುಕ್ತ ಗೋಪಾಲ್ ಜಾದವ್ ವಿಶೇಷ ಆಹ್ವಾನಿತರಾಗಿರುವರು ಎಂದರು.
ಶ್ರೀ ಸಿದ್ಧಿವಿನಾಯಕ ಸೇವಾ ಮಂಡಳಿ ವತಿಯಿಂದ ೪೭ನೇ ವರ್ಷದ ಸಿದ್ಧಿವಿನಾಯಕ ಪ್ರತಿಷ್ಠಾಪನಾ
Leave a comment
Leave a comment