ತುಮಕೂರು ಜಿಲ್ಲಾ ಅಂಬೇಡ್ಕರ್ ಸೇನೆ ವತಿಯಿಂದ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷರು, ನಟ, ನಿರ್ಮಾಪಕರಾದ ಡಾ. ಪಿ.ಮೂರ್ತಿರವರ 45ನೇ ಹುಟ್ಟು ಹಬ್ಬವನ್ನು ಬಟವಾಡಿಯಲ್ಲಿರುವ ದಾರೀದೀಪ ಚಾರಿಟಬಲ್ ಟ್ರಸ್ಟ್ನ ಆಶ್ರಮದಲ್ಲಿರುವ ಅಂಧ ಹೆಣ್ಣು ಮಕ್ಕಳೊಂದಿಗೆ ಸರಳವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕೋರಾ ರಾಜಣ್ಣನವರು ಮಾತನಾಡಿ ಡಾ. ಪಿ.ಮೂರ್ತಿರವರು ಹಲವಾರು ಸಾಮಾಜಿಕ ಕಾರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ, ಅವರ ಹುಟ್ಟು ಹಬ್ಬವನ್ನು ಅಂಧ ಹೆಣ್ಣು ಮಕ್ಕಳೊಂದಿಗೆ ಆಚರಿಸುತ್ತಿರುವುದು ನಮಗೆ ಏನೋ ಒಂದು ರೀತಿಯ ಮನೋವುಲ್ಲಾಸ ತರುತ್ತದೆ ಏಕೆಂದರೆ ಬಾಬಾ ಸಾಹೇಬರ ಆಶಯವು ಸಹ ಧೀನ, ದಲಿತರು, ಅಬಲರಿಗೆ ನ್ಯಾಯ ದೊರಕಿಸುವುದು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶವನ್ನು ಹೊಂದಿದ್ದರು ಅವರ ಆಶಯದಂತೆ ನಾವು ನಡೆಯುತ್ತಿದ್ದೇವೆಂದು ತಿಳಿಸಿದರು.
ಅಂಬೇಡ್ಕರ್ ಸೇನೆಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ಕೆ.ಸುಮರವರು ಮಾತನಾಡಿ ನೆನ್ನೆಯಷ್ಟೇ ನಿಧನರಾದ ಕೆ.ಶಿವರಾಂ ಅವರ ಅಗಲಿಕೆ ನಮಗೆ ಬಹಳ ನೋವು ತಂದಿದೆ, ಅವರು ಸರಳ ಸಜ್ಜನಿಕೆಗೆ ಹಾಗೂ ಅವರ ಚಿಂತನೆಗಳು ಅಪಾರವಾದದ್ದು ಅವರ ಅಗಲಿಕೆಯ ಸುದ್ಧಿ ಕೇಳಿ ನಮಗೆ ಆಘಾತವುಂಟಾಯಿತು, ಆದುದರಿಂದ ಅವರ ಆತ್ಮಕ್ಕೆ ಶಾಂತಿ ದೊರಕಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದು ಹೇಳಿದರಲ್ಲದೇ, ಈ ಸಮಯದಲ್ಲಿ ಎಲ್ಲರೂ ಎರಡು ನಿಮಿಷಗಳ ಕಾಲ ಸಂತಾಪವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇನೆಯ ಮಂಜಮ್ಮ, ಶೋಭಾ, ಶಿವರಾಜು, ಅಂಜನಮೂರ್ತಿ, ವಿಜಯ್ ಹಾಗೂ ಬೆಳ್ಳಾವಿ ಹೋಬಳಿ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.