ಕಲ್ಬುರ್ಗಿ ನಗರದಲ್ಲಿಂದು 206ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿ ಹಿರಾಪುರ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭೀಮಾ ಕೋರೆಗಾಂವ್ ವಿಜಯೋತ್ಸವನ್ನು ಭೀಮಾ ಕೋರೆಗಾಂವ್ ಅವರ ಸ್ತಂಭವನ್ನು ನಿರ್ಮಿಸಿ ನಾನಾ ಹೂಗಳಿಂದ ಶೃಂಗಾರ ಗೊಳಿಸಿ ಬಹು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕೋರೆಗಾವ್ ಯುದ್ಧದಲ್ಲಿ ಹೋರಾಡಿದ ವೀರಕಲಿಗಳಿಗೆ ಬುದ್ಧ ಡಾ: ಬಿ. ಆರ್ ಅಂಬೇಡ್ಕರ್ ಅವರಿಗೆ ಬಂತೇಜಿಗಳಿಂದ ಮತ್ತು ಸರ್ವ ಭೀಮಾ ಕೋರೆಗಾವ್ ಅವರ ಅಭಿಮಾನಿಗಳಿಂದ ಮೇಣದಬತ್ತಿ ಹಚ್ಚುವುದರ ಮುಖಾಂತರ ಪುಷ್ಪ ನಮನ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಬಂಜೆಗಳಿಂದ ಪ್ರಾರ್ಥನೆ ಸಲ್ಲಿಸಲಾಯಿತು.
ತದನಂತರ ಭೀಮ ಭೀಮ ಕೋರೆಗಾವ್ ಅವರ ಅಭಿಮಾನಿಗಳು ತಂಡೋಪ ತಂಡದಿಂದ ಆಗಮಿಸಿ ಪುಷ್ಪ ನಮನ ಸಲ್ಲಿಸಿ ನಂತರ ಅಲ್ಲಿ ಬಂದಿರ್ತಕಂತ ಎಲ್ಲಾ
ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಿದರು.ಇದೇ ಖುಷಿಯಲ್ಲಿ ಡಿ.ಜೆ ಸೌಂಡ್ ಹಚ್ಚಿ ಕುಣಿದು ಕೂಪ್ಪಳಸಿದರು.
ತದನಂತರ ಸಮಿತಿ ಮುಖಂಡರಾದ ಪವನ್ ಹೀರಾಪೂರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಇತಿಹಾಸದಲ್ಲಿ ಮುಚ್ಚಿ ಹೋದ ಸಾಹಸದ ಘಟನೆ 30,000 ಸೈನಿಕರನ್ನು ಕೇವಲ 500 ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನ ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ ,ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಜಾತಿ ಅಸ್ಪೃಶ್ಯತೆ ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹಾರ ಸೈನಿಕರ ಧೈರ್ಯ ಸಾಹಸ ಕೆಚ್ಚೆದೆಯ ಹೋರಾಟ ಶೋಷಿತರು ಮೇಲ್ಜಾತಿ ಶೋಷಕರ ವಿರುದ್ಧ ಅವರ ಘೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ಘೋಷಿಸಿದ ನಡೆಸಿ ಗೆಲವು ಅದು ಭೀಮಾ ತೀರದಲ್ಲಿ ನಡೆದ್ದರಿಂದ ಅದು ಇತಿಹಾಸದಲ್ಲಿ ಭೀಮಾ ಕೋರೆಗಾವ್ ಯುದ್ಧವೆಂದೇ ಪ್ರಸಿದ್ಧವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರುಗಳಾದ ಪವನ್ ಹಿರಾಪೂರ್, ನಿಖಿಲ್ ಹತ್ತರಗಿ, ಸೂರ್ಯಕಾಂತ್ ದೊಡ್ಮನಿ, ವಿದ್ಯಾಧರ್ ಡಿಪಿ ,ರೋಹನ್ ಮೈನಾಳಕರ, ಸಂದೀಪ್ ಸಿಂಗೆ, ದಯಾನಂದ ಕೋಟೆ ,ಪವನ್ ದಿಕ್ಸಸಂಗಿ, ಪ್ರಶಾಂತ್ ಕಟ್ಟಿಮನಿ, ಪ್ರದೀಪ್, ಯಲ್ಲಾಲಿಂಗ ಕಣ್ಣಿ, ಸೇರದಂತೆ ಎಲ್ಲಾ ಭೀಮಾ ಕೋರೆಗಾಂವ್ ಅಭಿಮಾನಿಗಳು ಉಪಸ್ಥಿತರಿದ್ದರು.