20 ಸಾವಿರ ಕಮಿಷನ್ ಆರೋಪ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಎಂದ ಎಂ ವಾಯ್ ಪಾಟೀಲ್.
ಅಫಜಲಪೂರ ತಾಲೂಕಿನಲ್ಲಿ ವಸತಿ ಯೋಜನೆಯ ಮನೆ ಹಂಚಿಕೆಯಲ್ಲಿ ಶಾಸಕರ ಆಪ್ತರು ಕಮಿಷನಗಾಗಿ ಡಿಮ್ಯಾಂಡ್ ಇಡುತ್ತಿದ್ದಾರೆ ಎಂಬ ನಾಟಿಕಾರ ಆರೋಪ ನನ್ನ ಗಮನಕ್ಕೆ ಬಂದಿದ್ದು ಹಾಗಾಗಿ , ಕ್ಷಮಿಷನಗಾಗಿ ಯಾರೇ ಡಿಮ್ಯಾಂಡ್ ಇಟ್ಟರು ಅವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗುವದು ಎಂದು ಶಾಸಕ ಎಂ ವಾಯ್ ಪಾಟೀಲ್ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾದ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು ತಾಲೂಕಿನಲ್ಲಿ 2500 ಮನೆಗಳು ವಸತಿ ಯೋಜನೆಯಲ್ಲಿ ಮಂಜೂರಾಗಿದ್ದು 12 ಗ್ರಾಮ ಪಂಚಾಯತಗಳಿಗೆ ಈಗಾಗಲೇ ಕೆಲವು ಮನೆಗಳನ್ನು ಅಗತ್ತ್ಯಾತೆಗೆ ಅನುಗುಣವಾಗಿ ಕಡುಬಡವ ಫಲನುಭವಿಗಳಿಗೆ ಹಂಚಿಕೆ ಮಾಡಲು ಆದೇಶ ನೀಡಲಾಗಿದ್ದು ಅದರಲ್ಲಿ ನಿಷ್ಪಕ್ಷ ವಾಗಿ ಮನೆ ಹಂಚಿಕೆ ಮಾಡಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು. ಶಾಸಕರ ಆಪ್ತ ಗ್ಯಾಂಗ್ ಕಮಿಷನಗಾಗಿ ಒಂದು ಮನೆ ಹಂಚಲು 20 ಸಾವಿರ ರೂಪಾಯಿ ಡಿಮ್ಯಾಂಡ್ ಇಡುತ್ತಿದ್ದಾರೆ ಎಂಬ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ನಾಟಿಕಾರ ಅವರ ಆರೋಪ ಎಷ್ಟರ ಮಟ್ಟಿಗೆ ಸತ್ಯವಿದೆ ಎಂಬುದು ನನಗೆ ಗೊತ್ತಿಲ್ಲ ಆದರೆ ಅವರು ಮಾಡಿರುವ ಆರೋಪ ನಿಜವೇ ಆಗಿದ್ದರೆ ಯಾರನ್ನು ರಕ್ಷಿಸದೆ,ಯಾವುದೇ ಮುಲಾಜಿಲ್ಲದೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು, ಈಗಾಗಲೇ ತಾಲೂಕಿನಲ್ಲಿ ಹಲವು ರಸ್ತೆಗಳು ಹಾಳಾಗಿದ್ದು ಅವುಗಳ ದುರಸ್ಥಿ ಕಾರ್ಯ ಮಾಡುತ್ತಿದ್ದೇವೆ, ನಾವು ಮೊದಲು ಶಾಲೆಗಳಲ್ಲಿ ಸೋರುತ್ತಿರುವ ಹಳೆಯ ಕಟ್ಟಡಗಳನ್ನು ತೆಗುದು ಹಾಕಿ ಉತ್ತಮ ಶಾಲಾ ಕೋಣೆಗಳ ನಿರ್ಮಾಣಕ್ಕೆ ಒತ್ತು ನೀಡುತ್ತಿದ್ದೇವೆ ಎಂದರು ಹಾಗೂ ತಮ್ಮ ಸ್ವ ಗ್ರಾಮ ದೇಸಾಯಿ ಕಲ್ಲೂರ್ ಶಾಲೆಯ ಶಿಥಿಲಗೊಂಡಿರುವ ಶಾಲಾ ಕೊಠಡಿ ಕುರಿತು ಮಾತನಾಡಿದ ಅವರು ಶೀಘ್ರದಲ್ಲಿ ಶಿಥಿಲಗೊಂಡಿರುವ ಶಾಲಾ ಕೊಟ್ಟಡಿಗಳನ್ನು ಅಭಿವೃದ್ಧಿ ಪಡಿಸಲು ಅಧಿಕಾರಿಗಳಿಗೆ ಸುಚಿಸುತ್ತೇನೆ ಎಂದರು.ತಾಲೂಕಿನಲ್ಲಿ ಹಲವು ಇಲಾಖೆಗಳಲ್ಲಿ ಪ್ರಭಾರಿ ಅಧಿಕಾರಿಗಳು ಇದ್ದಾರೆ ಹಾಗಾಗಿ ಇಲಾಖೆಗಳ ಕಾರ್ಯ ಕಲಾಪಗಳಿಗೆ ತೊಂದರೆ ಯಾಗಿತಿದ್ದು ಕೂಡಲೇ ಶಾಶ್ವತ ಅಧಿಕಾರಿಗಳನ್ನು ನೇಮಿಸಬೇಕು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಹಲವು ಇಲಾಖೆಗಳಿಗೆ ಈಗಾಗಲೇ ಶಾಶ್ವತ ಅಧಿಕಾರಿಗಳನ್ನು ಸರ್ಕಾರ ನೇಮಕ ಮಾಡಿದ್ದೂ ಇನ್ನುಳಿದ ಇಲಾಖೇಗಳಿಗೆ ಅತೀ ಶೀಘ್ರದಲ್ಲಿ ಅಧಿಕಾರಿಗಳ ನೇಮಕ ಮಾಡಲಾಗುವದು ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಶರಣು ಕುಂಬಾರ್, ಶಿವಾನಂದ ಗಾಡಿ ಸಾಹುಕಾರ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ವರದಿ ಚನ್ನು ಹಿಂಚಗೇರಿ ಅಫಜಲಪುರ