ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ವಿಶ್ವಮಾನವ ಬ್ರಹ್ಮಶ್ರೀ ನಾರಾಯಣಗುರು ಅವರ 170ನೇ ಜಯಂತೋತ್ಸವವನ್ನು ತುಮಕೂರು ನಗರದ ಅಮಾನಿಕೆರೆ ಪಾರ್ಕ್ ಆವರಣದಲ್ಲಿ ನಾರಾಯಣಗುರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎನ್.ಕೆ.ನಿಧಿಕುಮಾರ್ರವರು ಮಾತನಾಡಿ ನಾರಾಯಣಗುರು ಅವರ ಆದರ್ಶಗಳು ಹಾಗೂ ಅವರ ಈ ಭೂಮಿಗೆ ನೀಡಿರುವ ಕೊಡುಗೆಯ ಮಾತನಾಡುತ್ತಾ ಅವರ ಕಾಲಘಟ್ಟದಲ್ಲಿ ನಮ್ಮ ದೇಶದಲ್ಲಿದ್ದ ಸಾಮಾಜಿಕ ಪಿಡುಗನ್ನು ಹೋಗಲಾಡಿಸುವಲ್ಲಿ ಅವರ ಪಾತ್ರ ಅತ್ಯಂತ ಹಿರಿಮೆ ತಂದಿದೆ, ಅಂದಿನ ಜನಜೀವನ ಆಧುನಿಕತೆಯಿಂದ ವಂಚಿತವಾಗಿತ್ತು, ಅಂತಹ ಕ್ಲಿಷ್ಠ ಸಂದರ್ಭದಲ್ಲಿಯೂ ಸಹ ಬ್ರಹ್ಮಶ್ರೀ ನಾರಾಯಣಗುರು ರವರು ದೇಶದ ನಾನಾ ಕಡೆ ಪಾದಯಾತ್ರೆ ಮಾಡಿ ಜನರಲ್ಲಿದ್ದ ಮೂಡನಂಬಿಕೆಗಳನ್ನು ಹೋಗಲಾಡಿಸುವಲ್ಲಿ ಯಶಸ್ವಿಯಾಗಿದ್ದರು ಎಂದರಲ್ಲದೇ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ದಲಿತರೆಂದರೇ ಎಲ್ಲಿಲ್ಲದ ಪ್ರೀತಿ, ವಾತ್ಸಲ್ಯವಿತ್ತು ಅವರ ಬೋಧನೆಗಳಲ್ಲಿ ದೇವರು ಒಬ್ಬನೇ ನಾಮ ಹಲವು, ಮತ್ತೊಬ್ಬರಿಗೆ ಸಹಾಯ ಮಾಡುವುದರ ಮೂಲಕ ಅವರ ನಗುವಿನಲ್ಲಿ ದೇವರನ್ನು ಕಾಣಬೇಕು, ಮತ್ತೊಬ್ಬರಿಗೆ ಕೆಡುಕನ್ನು ಬಯಸದೇ ಸದಾ ಒಳ್ಳೆಯತನದಿಂದ ಜೀವನ ನಡೆಸಿದರೆ ಸಾರ್ಥಕ ಜೀವನ ನಡೆಸಿದಂತೆ ಆಗುತ್ತದೆ ಎಂದು ಗುರುಗಳು ಬೋಧನೆ ಮಾಡುತ್ತಿದ್ದರು, ಜೊತೆಗೆ ಈಡಿಗ ಸಮುದಾಯವು ಆಗಿನ ಕಾಲಘಟ್ಟದಲ್ಲಿ ನಗರ ಜೀವನದಿಂದ ಬಹಳ ದೂರದಲ್ಲಿಯೇ ವಾಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು ಅದನ್ನು ಹೋಗಲಾಡಿಸಿ ಸಾಮಾಜಿಕ ಜನಜೀವನ ನಡೆಸಲು ನಾರಾಯಣಗುರುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರಲ್ಲದೇ ಇಂತಹ ಮಹಾನ್ ಚೇತನರ ಜನ್ಮದಿನೋತ್ಸವವನ್ನು ಆಚರಿಸುತ್ತಿರುವುದು ನಮ್ಮ ಸುದೈವ ಎಂದರು ಈ ಸಂದರ್ಭದಲ್ಲಿ ಆಗಮಿಸಿದ್ದ ಸಾರ್ವಜನಿಕರಿಗೆ ಸಿಹಿ ವಿತರಣೆ ಮಾಡಲಾಯಿತು.