ತುಮಕೂರು : ಸಿದ್ದಗಂಗಾ ತಾಂತ್ರಿಕ ಮಹಾವಿಧ್ಯಾಲಯದಲ್ಲಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದದೊಂದಿಗೆ 14 ನೇ ಪದವಿ ಸಮಾರಂಭವನ್ನು 16-9-2023 ಸಂಭ್ರಮ ಆಚರಿಸಲಾಗುವುದು
ತುಮಕೂರಿನ ಪ್ರತಿಷ್ಠಿತ ಸಿದ್ದಗಂಗಾ ತಾಂತ್ರಿಕ ಮಹಾವಿಧ್ಯಾಲಯದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಗಳ ಕೃಪಾಶೀರ್ವಾದಗಳೊಂದಿಗೆ. ಪೂಜ್ಯ ಅಧ್ಯಕ್ಷರಾದ ಡಾ. ಶ್ರೀ ಶ್ರೀ ಸಿದ್ದಲಿಂಗಸ್ವಾಮಿಯವರ ದಿವ್ಯ ಉಪಸ್ಥಿತಿಯಲ್ಲಿ 14 ನೇ ಪದವಿ ಸಮಾರಂಭವನ್ನು 16 – 9 – 2023 ರಂದು ನರರವೇರಲಿದೆ ಎಂದು ಸುದ್ದಿ ಮಾಧ್ಯಮಗಳೊಂದಿಗೆ ಸಂಸ್ಥೆಯ ಪ್ರೊಫೆಸರ್ ಹಾಗೂ ಪ್ರಾಂಶುಪಾಲರು ಗಳಾದ ದಿನೇಶ್ ಎಸ್ ವಿ. ಸಿದ್ದಲಿಂಗಸ್ವಾಮಿ ಮತ್ತು ಶಿವಕುಮಾರ ರವರುಗಳ ಸುದ್ದಿಘೋಷ್ಠಿಯಲ್ಲಿ ಸಂಸ್ಥೆಯ ಸಮಾರಂಭದಲ್ಲಿ 34 ಅಭ್ಯರ್ಥಿಗಳು ಸಮಾರಂಭದಲ್ಲಿ ಪದವಿ ಪ್ರಮಾಣ ಪತ್ರಗಳನ್ನು ಪಡೆಯಲಿದ್ದು. ಸಂಸ್ಥೆಯ ಮತ್ತು ದಾನಿಗಳಿಂದ 64 ಚಿನ್ನದ ಪದಕಗಳನ್ನು ಸ್ಥಾಪಿಸಲಾಗಿದೆ.
ಈವರೆಗೆ ಸಂಸ್ಥೆಯಲ್ಲಿ ಎಂಟೆಕ್ ನ 18 ಅಭ್ಯರ್ಥಿಗಳು ಮತ್ತು ಎಂಜಿನಿಯರಿಂಗ್ ಕಾರ್ಯಕ್ರಮಗಳ 723 ಅಭ್ಯರ್ಥಿಗಳು ಮತ್ತು ಬಿಆರ್ಕ್ ನ 34 ಅಭ್ಯರ್ಥಿಗಳು ಈ ಕಾರ್ಯಕ್ರಮದಲ್ಲಿ ಪದವಿ ಪ್ರಮಾಣಪತ್ರಗಳನ್ನು ಪಡೆಯಲಿದ್ದಾರೆ.
ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿರುವ ಅಭ್ಯರ್ಥಿಗಳು ಶ್ರೀ ಶ್ರೀ ಶಿವಕುಮಾರಸ್ವಾಮೀಜಿ ಚಿನ್ನದ ಪದಕವನ್ನು ಪಡೆಯಲಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದಿರುವ ವಿಧ್ಯಾರ್ಥಿಗಳು 10 ಲಕ್ಷ ರೂ ಗಳಿಗೂ ಅಧಿಕ ವೇತನ ನೀಡುವ ಪ್ರಖ್ಯಾತ ಕಂಪನಿಗಳಾದ ಸಿಸ್ಕೋ. ಟ್ವಿಲಿಯೋ. ಇನ್ಮೂಟ್. ಅಮೆಜಾನ್. ಮರ್ಸಿಡೀಸ್ಬೆನ್ಜ್. ರೆಡ್ ಬಸ್. ಸೋನಿ. ಸೀಮೆನ್ಸ್. ಎಲ್ & ಟಿ ಕಂಪನಿ. ಒರಾಕಲ್. ಹೀಗೆ ಇನ್ನು ಮುಂತಾದ ಕಂಪನಿಗಳಲ್ಲಿ ಉದ್ಯೋಗ ಪಡೆದು ಅತಿ ಹೆಚ್ಚು ಸಂಬಳ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿದ್ದಾರೆ.
ಈ 16-9-2023 ರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹರೀಶ್ ರವಿ. ಮ್ಯಾನೇಜಿಂಗ್ ಡೈರೆಕ್ಟರ್. ಯೂರೋಪಿನ್ಸ್.
ಐ ಟಿ. ಸಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರುಗಳು ಭಾಗವಹಿಸುವರು. ಹಾಗೂ ಸಿದ್ದಗಂಗಾ ತಾಂತ್ರಿಕ ಸಂಸ್ಥೆಯ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಶ್ರೀ
ಸಿದ್ದಲಿಂಗ ಸ್ವಾಮೀಜಿಯವರು ಪದವಿ ಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸುವರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ. ಅಕಾಡಮಿ ಕೌನ್ಸಿಲ್
ನ ಸದಸ್ಯರು ಮತ್ತು ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದ ಆಹ್ವಾನಿತರು ವಿಧ್ಯಾರ್ಥಿಗಳು ಮತ್ತು ಪದವೀಧರರ ಪೋಷಕರು ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.