ಮಧುಗಿರಿ ಪಟ್ಟಣದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ “ಕ್ಷೀರಭಾಗ್ಯ” ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆಯಲ್ಲಿ ರೈತಗೀತೆಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ರಾಜ್ಯದ ೧೪ ಹಾಲು ಒಕ್ಕೂಟಗಳನ್ನು ಕ್ಷೀರಭಾಗ್ಯ ಸಮಾವೇಶಕ್ಕೆ ಸುಮಾರು ೫೦.೦೦೦ ಸಾವಿರಕ್ಕೂ ಅಧಿಕ ಜನಸ್ತೋಮ ಸೇರಿದ್ದರು.
ಈ ಸಮಯದಲ್ಲಿ ಕೆ ಎಂ ಎಪ್ ಅಧ್ಯಕ್ಷರಾದ ಭೀಮಾನಾಯಕ್ ರವರು ಮಾತನಾಡುತ್ತಾ ಸಹಕಾರಿ ಸಚಿವ ಕೆ ಎನ್ ರಾಜಣ್ಣ ನವರನ್ನು ಕುರಿತು ಮಾತನಾಡುತ್ತಾ. ಮಧುಗಿರಿ ಕ್ಷೇತ್ರವನ್ನು ಅಭಿವೃದ್ದಿ ಪಡಿಸುವಲ್ಲಿ ಸಹಕಾರ ಸಚಿವರ ಶ್ರಮ ಬಹಳವಾಗಿದೆ ಎಂದು ಹೇಳುವ ಮೂಲಕ ಹಾಲು ಒಕ್ಕೂಟದ ಅಧ್ಯಕ್ಷ ಮಾತನಾಡಿದರು.
ಈ ಸಮಯದಲ್ಲಿ ಡಾ. ಜಿ ಪರಮೇಶ್ವರ್ ಜಿಲ್ಲಾ ಉಸ್ತುವಾರಿಗಳು ಮಾತನಾಡುತ್ತಾ. ಈ ರಾಜ್ಯಕ್ಕೆ ಜನಪರ ಕಾಳಜಿ ಇರುವಂತ ಮುಖ್ಯಮಂತ್ರಿಗಳಾಗಿದ್ದ ದಿವಂಗತ ದೇವರಾಜು ಅರಸು
ರವರಂತ ಮುಖ್ಯಮಂತ್ರಿಗಳು ಅಂದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರುಮಾತ್ರ ಎಂದು ಹೇಳುವ ಮೂಲಕ ಮಧುಗಿರಿ ಕ್ಷೇತ್ರದ ಕೆ ಎನ್. ರಾಜಣ್ಣ ನವರು ಕ್ಷೇತ್ರಕ್ಕೆ ೧೫೬ ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಶಂಕುಸ್ಥಾಪನೆ ನೆರವೇರಿಸಿದರು.
ತುಮಕೂರು ಉಪ ವಿಭಾಗವಾದ ಮಧುಗಿರಿ. ಕೊರಟಗೆರೆ. ಪಾವಗಡ. ಶಿರಾ. ಈ ತಾಲ್ಲೋಕುಗಳು ಬರಪೀಡಿತ ಪ್ರದೇಶಗಳಾಗಿವೆ. ಇವುಗಳ ಅಭಿವೃದ್ಧಿಗೆ ಮಧುಗಿರಿ ಜಿಲ್ಲೆಯನ್ನಾಗಿ ಮಾಡಬೇಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಮಧುಗಿರಿಯ ಬೆಟ್ಟ ಹಿಡೀ ಎಷ್ಯಾಖಂಡಕ್ಕೆ ವಿಶೇಷವಾಗಿದದ್ದು ಅದನ್ನು ರೋಪ್ ವೇ ಮಾಡಲು ಏಕಶಿಲಾ ಬೆಟ್ಟವನ್ನು ಪ್ರವಾಸಿ ತಾಣವಾಗಿ ಮಾಡಲು ಸಹಕರಿಸಬೇಕು ಎಂದು ಏರುಧ್ವನಿಯಲ್ಲಿ ಮಾತನಾಡಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಹಾಗೂ ಇತರ ಗಣ್ಯರ ಗಮನ ಸೆಳೆದು ಮಾತನಾಡಿದರು.
ಸಹಕಾರಿ ಸಚಿವರಾದ ಕೆ ಎನ್. ರಾಜಣ್ಣ ನವರು ಮಾತನಾಡುತ್ತಾ ಅನ್ನಭಾಗ್ಯ. ಕ್ಷೀರಭಾಗ್ಯ.
ಗೃಹಲಕ್ಷ್ಮಿ.ಗೃಹಜ್ಯೋತಿ. ಇನ್ನು ಅನೇಕ ಸರ್ಕಾರದ ಕಾರ್ಯಕ್ರಮಗಳ ವಿಚಾರಗಳ ಪ್ರಸ್ತಾಪಿಸಿದರು. ಮಧುಗಿರಿ ಅಭಿವೃದ್ಧಿ ಪಡಿಸಲು ಸಹಕರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮತ್ತೊಮ್ಮೆ ಮನವಿಮಾಡುವ ಮೂಲಕ ಈ ಕಾರ್ಯಕ್ರಮದಲ್ಲಿ ಸಮಯದ ಅಭಾವ ಇರುವದರಿಂದ ನನ್ನ ಮಾತು ಮುಗಿಸುತ್ತೇನೆ ಎಂದರು.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅಧ್ಯಕ್ಷತೆ ವಹಿಸಿ ಮಧುಗಿರಿ ಕ್ಷೇತ್ರಕ್ಕೆ ವಿವಿಧ ಕಾಮಗಾರಿಗಳ ಚಾಲನೆ ನೀಡುವುದರ ಮೂಲಕ ಮಾತನಾಡುತ್ತಾ. ಹತ್ತು ವರ್ಷಗಳ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಕೋಲಾರ ಜಿಲ್ಲೆಯ ಹೊಸಕೋಟೆ ಯಲ್ಲಿ ಕ್ಷೀರಭಾಗ್ಯಕ್ಕೆ ಚಾಲನೆ ನೀಡಿದ್ದೆ. ಈಗ ಹತ್ತು ವರ್ಷ ಪೂರೈಸಿದ ಈ ದಿನವೂ ಸಹ ಮುಖ್ಯಮಂತ್ರಿಯಾಗಿದ್ದೇನೆ. ಈ ಕಾರ್ಯಕ್ರಮ ನನಗೆ ತುಂಬಾ ಸಂತಸ ತಂದಿದೆ ಎಂದು ಹೇಳಿ ಸಂತೋಷಪಟ್ಟರು.
ಶಾಲೆಯ ಎಲ್ಲಾ ಮಕ್ಕಳಿಗೂ ಶೂ ಭಾಗ್ಯವನ್ನು ಇದೇ ಮಧುಗಿರಿಯಲ್ಲಿ ಘೋಷಣೆ ಮಾಡಿದ್ದೆ. ಕ್ಷೀರಭಾಗ್ಯದ ಕಾರ್ಯಕ್ರಮಕ್ಕೆ ಅಂತರಾಕ್ಷ್ರೀಯ ಮಟ್ಟದಲ್ಲಿ ಶ್ಲಾಘನೆ ವ್ಯಕ್ತಪಡಿಸಿ ಪ್ರಶಸ್ತಿ ನೀಡಲಾಗಿದೆ ಎಂದರು.
ರಾಜ್ಯದ ಬಡ ವರ್ಗದ ಜನರಿಗೆ ಅನ್ನಭಾಗ್ಯ ಕಾರ್ಯಕ್ರಮ ನೀಡಿರುವುದು ಯಾರು ಹಸಿವಿನಿಂದ ಇರಬಾರದು ಎಂದು ನಾನು ಈ ಕಾರ್ಯಕ್ರಮವನ್ನು ತಂದಿದ್ದೇನೆ ಎಂದರು.
ನಾನು ಘೋಷಿಸಿದಂತ ಹತ್ತು ಕೇಜಿ ಹಕ್ಕಿ ನೀಡುವುದನ್ನು ಬಿಜೆಪಿಯ ಕೇಂದ್ರ ಸರ್ಕಾರ ಸಹಿಸದೆ ವಿರೋಧಿಸಿದ್ದಾರೆ.
ಮೊದಲು ಹಣ ಪಡೆದು ಹಕ್ಕಿ ಕೊಡುವುದಾಗಿ ಹೇಳಿದ ಕೇಂದ್ರ ಸರ್ಕಾರ ಆನಂತರ ದುರುದ್ದೇಶದಿಂದ ನಾನಾ ಕಾರಣ ನೀಡಿ ಹಕ್ಕಿ ಕೊಡುವುದಿಲ್ಲ ಎಂದು ನಿರಾಕರಿಸಿದರು. ಆದ್ದರಿಂದ ನಾವು ಹಕ್ಕಿ ಬದಲು ಜನರಿಗೆ ಹಣ ನೀಡಿದ್ಧೇವೆ.
ಆದರೆ ನಾವು ಈಗ ಹಣದ ಬದಲು ಹಕ್ಕಿಯನ್ನೇ ನೀಡಲು ತೀರ್ಮಾನಿಸಿದ್ದೇವೆ. ಏಕೆಂದರೆ ಯಾರು ಹಸಿವಿನಿಂದ ಸಾಯಬಾರದು ಎಂಬ ಉದ್ದೇಶ ಹೊಂದಲಾಗಿದೆ.
ಹೀಗೆ ಇನ್ನು ಅನೇಕ ಬಡವರ. ಕಾರ್ಮಿಕರ. ಹಿಂದುಳಿದವರ. ಮಹಳೆಯರ. ರೈತರ. ಶಾಲೆಯ ಬಡ ಮಕ್ಕಳ ವಿಧ್ಯಾಭ್ಯಾಸದ ಮತ್ತು ಗೃಹಲಕ್ಷ್ಮಿಯರಿಗೆ ಬಡ ನಿರುದ್ಯೋಗಿಗಳ ಪರ ಹಾಗೂ ನಮ್ಮ ಸರ್ಕಾರ ಇಂತಹವರ ಪರ ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಗೃಹಸಚಿವರು ಹಾಗೂ ಜಿಲ್ಲೆಯ ಉಸ್ತುವಾರಿಗಳಾದ ಜಿ.ಪರಮೇಶ್ವರ್ ರವರು. ಸಹಕಾರಿ ಸಚಿವರಾದ ಕೆ ಎನ್ .ರಾಜಣ್ಣ ನವರು. ವಿಧಾನ ಪರಿಷತ್ ಸದಸ್ಯರಾದ ರಾಜೇಂದ್ರ ರವರು. ದೆಹಲಿ ವಿಶೇಷ ಪ್ರತಿನಿಧಿಯಾದ ಶಿರಾ ಶಾಸಕ ಟಿ ಬಿ. ಜಯಚಂದ್ರ ರವರು. ಕುಣಿಗಲ್ ಶಾಸಕ ಡಾ. ಕೆ ಎಚ್. ರಂಗನಾಥ್ ರವರು. ಕೆ ಎಚ್ ನಿಂಗಪ್ಪ ರವರು. ಮಾಜಿ ಶಾಸಕ ಕಿರಣ್ ಕುಮಾರ್. ಕೆ ಎಂ ಎಪ್. ನಿಗಮದ ಅಧ್ಯಕ್ಷರಾದ ಭೀಮಾನಾಯಕ್ ರವರು. ಕೆ ಎಂ ಎಪ್ ಮಾಜಿ ಅಧ್ಯಕ್ಷ ಪ್ರೇಮ್ ಕುಮಾರ್ ರವರು. ಪಾವಗಡ ಶಾಸಕ ವೆಂಕಟೇಶ್ ರವರು.
ಕೃಷಿ ಸಚಿವ ವೆಂಕಟೇಶ್ ರವರು.
ಮತ್ತು ತುಮಕೂರು ಜಿಲ್ಲಾಧಿಕಾರಿ ಶ್ರೀನಿವಾಸ್ ರವರು. ಪೋಲಿಸ್ ವರಿಷ್ಠಾಧಿಕಾರಿಗಳಾದ ರಾಹುಲ್ ಕುಮಾರ್ ಷಾ ಪುರ್ ವಾಡ್ ರವರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಭು ಜಿ. ರವರು.ಹಾಗೂ ಇನ್ನು ಅನೇಕ ಗಣ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.
“ಕ್ಷೀರಭಾಗ್ಯ” ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆ
Leave a comment
Leave a comment