ಡಿ. ದೇವರಾಜು ಅರಸ್ ರವರ 109ನೇ ಜನ್ಮ ದಿನಾಚರಣೆ ತುಮಕೂರು: ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತುಮಕೂರು. ಇವರ ಸಂಯುಕ್ತಶ್ರಯದಲ್ಲಿ ಕರ್ನಾಟಕ ರಾಜ್ಯದ ಸನ್ಮಾನ್ಯ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಿಂದುಳಿದ ವರ್ಗಗಳ ಪರಿವರ್ತನೆಯ ಹರಿಕಾರರಾದ ಡಿ ದೇವರಾಜ್ ಅರಸ್ ರವರ 109ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ತುಮಕೂರು ಜಿಲ್ಲಾಧಿಕಾರಿಗಳಾದ ಶುಭ ಕಲ್ಯಾಣ್ ರವರು ದೇವರಾಜು ಅರಸ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಸಲ್ಲಿಸುವುದರ ಮೂಲಕ ರಥ ಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿಯದ ಸೋನಿಯಾ ವೆರ್ಣೇಕರ್, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾದ ಧನಿಯ ಕುಮಾರ್, ನೇಕಾರ ಸಮಾಜದ ಮುಖಂಡರಾದ ಬಿ ಎಲ್ ರವೀಂದ್ರ ಕುಮಾರ್, ಮರಾಠ ಸಮಾಜದ ಮುಖಂಡರಾದ ಎಸ್.
ರಾಮಚಂದ್ರರಾವ್, ಅಲ್ಪಸಂಖ್ಯಾತ ಮುಖಂಡರಾದ ಶಬ್ಬೀರ್ ಅಹ್ಮದ್, ಸಾದರ ಸಮಾಜದ ಮುಖಂಡರಾದ ಪಿ ಮೂರ್ತಿ, ಅರಸು ಸಮಾಜದ ಮುಖಂಡರಾದ ಲಕ್ಷ್ಮಿಕಾಂತ್ ಅರಸ್, ಸವಿತಾ ಸಮಾಜದ ಮುಖಂಡರಾದ ಮಂಜೆಶ್, ಬಲಿಜ ಸಮಾಜದ ಮುಖಂಡರಾದ ಹೆಬ್ಬೂರು ಶ್ರೀನಿವಾಸ್, ಮಡಿವಾಳ ಸಮಾಜದ ಮುಖಂಡರಾದ ಕುಮಾರ್, ಡಿಎಸ್ಎಸ್ ಮುಖಂಡರಾದ ಪಿ ಎನ್ ರಾಮಯ್ಯ, ಕನ್ನಡ ಸಂಸ್ಕೃತಿ ವೇದಿಕೆಯ ರಾಜ್ಯಧ್ಯಕ್ಷರಾದ ಕನ್ನಡ ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.