ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೇವಾಲಯಗಳಿಗೆ ೧.೫ಲಕ್ಷ ವಿತರಣೆ
ತುಮಕೂರು: ತಾಲ್ಲೋಕು ಗಳಿಗೆನಹಳ್ಳಿ ಕಾರ್ಯ ಕ್ಷೇತ್ರದ ಲಿಂಗಿ ಕಟ್ಟೆ ಗ್ರಾಮದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ಮತ್ತು ಶನೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಪರಮಪೂಜ್ಯ ಡಾ||.ಡಿ.ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದಂತಹ ರೂ. ೧,೫೦,೦೦೦ ಡಿಡಿಯನ್ನು ತುಮಕೂರು ತಾಲ್ಲೋಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಶ್ರೀಮತಿ ಸುನಿತಾಪ್ರಭು ರವರು ವಿತರಣೆ ಮಾಡಿ ಯೋಜನೆಯ ಹಲವಾರು ಕಾರ್ಯಕ್ರಮಗಳ ಕುರಿತು ಮಾಹಿತಿ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಲಕ್ಷ್ಮೀದೇವಮ್ಮ ಹಾಗೂ ಉಪಾಧ್ಯಕ್ಷರಾದ ಶ್ರೀಯುತ ಗಂಗಾ ಮೂರ್ತಿ, ಪ್ರದೀಪ್ ದೇವಾಲಯದ ಪದಾಧಿಕಾರಿಗಳು, ವಲಯದ ಮೇಲ್ವಿಚಾರಕರಾದ ಹೇಮಂತ್ ಕುಮಾರ್ ಮತ್ತು ಸೇವಾ ಪ್ರತಿನಿಧಿ ಗೀತಾ ರವರು ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘದ ಸದಸ್ಯರು ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದೇವಾಲಯಗಳಿಗೆ ೧.೫ಲಕ್ಷ ವಿತರಣೆ
Leave a comment
Leave a comment