ತುಮಕೂರು,- ಇಲ್ಲಿನ ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ವಾಟರ್ ಫಾರ್ ವಾಯ್ಸ್ಲೆಸ್ ಪ್ರಾಜೆಕ್ಟ್ ಅಂಗವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸೇರಿದಂತೆ ನಗರದ 13 ಪೊಲೀಸ್ ಠಾಣೆಗಳಿಗೆ ಎಸ್ಪಿ ರಾಹುಲ್ಕುಮಾರ್ ಶಹಪೂರ್ವಾಡ್ ಅವರ ಮುಖೇನ ಪಕ್ಷಿಗಳ ನೀರಿನ ದಾಹ ಇಂಗಿಸಲು ಸಿಮೆಂಟ್ ನೀರಿನ ತೊಟ್ಟಿಗಳನ್ನು ವಿತರಿಸಿದರು.
ಜಿಲ್ಲಾ ಪೊಲೀಸ್ ಕಚೇರಿಯ ಆವರಣ ಸೇರಿದಂತೆ ನಗರದಲ್ಲಿರುವ ತಿಲಕ್ಪಾರ್ಕ್ ವೃತ್ತ ನಿರೀಕ್ಷಕರ ಠಾಣೆ, ನಗರಠಾಣೆ, ಗ್ರಾಮಾಂತರ ಠಾಣೆ, ಸಂಚಾರಿ ಪೊಲೀಸ್ ಠಾಣೆ, ಜಯನಗರ ಠಾಣೆ, ಕ್ಯಾತ್ಸಂದ್ರ ವೃತ್ತ ನಿರೀಕ್ಷಕರ ಕಚೇರಿ, ಮರಳೂರು ದಿಣ್ಣೆ ಹೊರ ಪೊಲೀಸ್ ಠಾಣೆ, ತಿಲಕ್ಪಾರ್ಕ್ ಪೊಲೀಸ್ ಠಾಣೆ, ಡಿವೈಎಸ್ಪಿ ಕಚೇರಿ, ಮಹಿಳಾ ಪೊಲೀಸ್ ಠಾಣೆ ಸೇರಿದಂತೆ 13 ಪೊಲೀಸ್ ಠಾಣೆಗಳ ಆವರಣಗಳಲ್ಲಿ ಪ್ರಾಣಿ ಪಕ್ಷಿಗಳು ನೀರು ಕುಡಿಯಲು ವ್ಯವಸ್ಥೆ ಕಲ್ಪಿಸುವ ಸಲುವಾಗಿ ನೀರಿನ ಸಿಮೆಂಟ್ ತೊಟ್ಟಿಗಳನ್ನು ಎಸ್ಐಟಿ ವಿದ್ಯಾರ್ಥಿಗಳು ನೀಡಿದರು.
ವಾಟರ್ ಫಾರ್ ವಾಯ್ಸ್ಲೆಸ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜೈನ್ ಸನ್ನಿ ನೇತೃತ್ವದಲ್ಲಿ ಪ್ರಾಣಿ-ಪಕ್ಷಿಗಳಿಗೆ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ದಾಹ ತಣಿಸಲು 2015 ರಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ. ಈ ಸಂಸ್ಥೆಯವರು ಎಸ್ಐಟಿ ಕಾಲೇಜಿನ ವಿದ್ಯಾರ್ಥಿಗಳಾದ ಮನೋಜ್, ಅಭಯ್, ಯಶಸ್ಸು, ಜೀವನ್, ಮನ್ಸೂರ ಅಹಮದ್ ಮತ್ತಿತರ ವಿದ್ಯಾರ್ಥಿಗಳಿಗೊಂದಿಗೆ ಸೇರಿ ನೀರಿನ ತೊಟ್ಟಿಗಳನ್ನು ವಿತರಿಸುವ ಮೂಲಕ ಮಾನವೀಯ ಕಾರ್ಯಕ್ಕೆ ನಾಂದಿ ಹಾಡಿದ್ದಾರೆ.
ವಾಟರ್ ಫಾರ್ ವಾಯ್ಸ್ಲೆಸ್ ಪ್ರಾಜೆಕ್ಟ್
Leave a comment
Leave a comment