ದೇಶದ ಪ್ರಗತಿಗಾಗಿ ಸಮರ್ಥ ಹೆಜ್ಜೆಗಳನ್ನಿಡಿ- ಕೆ.ಬಿ.ಜಯಣ್ಣ
ದೇಶದ ಸ್ವಾತಂತ್ರö್ಯಕ್ಕಾಗಿ ತ್ಯಾಗಬಲಿದಾನಗಳನ್ನು ಮಾಡಿದವರನ್ನು ನೆನೆಯುವುದು ನಮ್ಮ ಕರ್ತವ್ಯವಾಗುವುದೊಂದಿಗೆ ದೇಶದ ಪ್ರಗತಿಗಾಗಿ ಸಮರ್ಥ ಹೆಜ್ಜೆಗಳನ್ನಿಡುವುದು ನಮ್ಮ ಬದ್ಧತೆಯಾದಲ್ಲಿ ದೇಶವು ಮತ್ತಷ್ಟು ಸುಧಾರಣೆ ಕಾಣುತ್ತದೆ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾದ ಕೆ.ಬಿ.ಜಯಣ್ಣ ಹೇಳಿದರು.
ಅವರು ವಿದ್ಯಾವಾಹಿನಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ವಿದ್ಯಾನಿಧಿ ಕಾಲೇಜಿನ ಸಹಯೋಗದಲ್ಲಿ ನಡೆದ ಸ್ವಾತಂತ್ರೊö್ಯÃತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಮಾತನಾಡಿ, ‘ಈ ಬಾರಿಯ ಸ್ವಾತಂತ್ರೊö್ಯÃತ್ಸವಕ್ಕೆ ಪ್ರಧಾನಮಂತ್ರಿಗಳು ನೀಡಿದ ಕರೆ- ದೇಶ ಮೊದಲು, ಯಾವಾಗಲೂ ಮೊದಲು- ಎಂಬುದನ್ನು ನಾವು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ವೈಯುಕ್ತಿಕವಾದ ಸಾಧನೆಗಿಂತಲೂ ಸಮಷ್ಠಿಯಲ್ಲಿ ಸಾಧನೆಯೆಂಬುದು ಹೆಚ್ಚು ಅರ್ಥಪೂರ್ಣವಾಗಿರುತ್ತದೆ. ನಮ್ಮ ದೇಶದ ಪ್ರಗತಿ ಕಳೆದ ಹತ್ತು ವರ್ಷಗಳಿಂದೀಚೆಗೆ ಹಿಂದೆAದಿಗಿAತಲೂ ವೇಗವಾಗಿ ಸಾಗಿದೆಯೆಂದರೆ ಅದಕ್ಕೆ ಕಾರಣ ನಮ್ಮ ದೇಶದಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಇರುವುದು. ಭವಿಷ್ಯದ ಕುಡಿಗಳಾದ ಇಂದಿನ ವಿದ್ಯಾರ್ಥಿಗಳು ದೇಶಾಭಿಮಾನವನ್ನು ಎತ್ತರಿಸುವ ನಿಟ್ಟಿನಲ್ಲಿ ಮನಃಪೂರ್ವಕವಾಗಿ ಶ್ರಮಿಸಬೇಕು’ ಎಂದು ಕರೆನೀಡಿದರು.
ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜು ಮತ್ತು ವಿದ್ಯಾನಿಧಿ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಹಲವು ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಉಪನ್ಯಾಸಕಿ ಊರ್ಮಿಳಾ ನವೀನ್ ಬಹುಮಾನ ವಿಜೇತರನ್ನು ವೇದಿಕೆಗೆ ಬರಮಾಡಿಕೊಂಡರು.
ವಿದ್ಯಾರ್ಥಿನಿಯರಾದ ನಿವ್ಯಾ ಸ್ವಾಗತಿಸಿ, ರಶ್ಮಿ ವಂದಿಸಿದರು. ನಿತ್ಯಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾವಾಹಿನಿ ಪ್ರಥಮದರ್ಜೆ ಕಾಲೇಜು ಮತ್ತು ವಿದ್ಯಾನಿಧಿ ಕಾಲೇಜಿನ ಬೋಧಕ, ಬೋಧಕೇತರ ವೃಂದ ಮತ್ತು ವಿದ್ಯಾರ್ಥಿ/ನಿಯರು ಸ್ವಾತಂತ್ರö್ಯ ಸಂಭ್ರಮದಲ್ಲಿ ಭಾಗವಹಿಸಿದರು. ದೇಶಭಕ್ತಿಗೀತೆಗಳ ಸಮೂಹ ಗಾಯನ, ನೃತ್ಯ, ಪಿರಮಿಡ್ ಮೊದಲಾದುವುಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿ/ನಿಯರ ಶಿಸ್ತುಬದ್ಧ ಪಥಸಂಚಲನ ನೋಡುಗರ ಮನಸೆಳೆಯಿತು.
ದೇಶದ ಪ್ರಗತಿಗಾಗಿ ಸಮರ್ಥ ಹೆಜ್ಜೆಗಳನ್ನಿಡಿ
Leave a comment
Leave a comment