ಚುನಾವಣೆಯಲ್ಲಿ ರಾಜಕೀಯ ಶಕ್ತಿ ನೀಡುವವರು ದಲಿತರೇ, ಅಂಬೇಡ್ಕರ್ ಅವರು ದಲಿತರಿಗೆ ಮಾಡಿದ ಕಾನೂನುಗಳು ದುರ್ಬಳಕೆಯಾಗುತ್ತಿವೆ, ತುಮಕೂರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರಗಳ ಹಾವಳಿ ಹೆಚ್ಚಿದೆ – ವೈ.ಹೆಚ್.ಹುಚ್ಚಯ್ಯ ಕಳವಳ
ತುಮಕೂರು :- ಭಾರತ ದೇಶದಲ್ಲಿ ಸಂವಿಧಾನ ರಚನೆ ಮಾಡಿ ದೌರ್ಜನ್ಯಕ್ಕೊಳಗಾದ ಅಸ್ಪöÈಶ್ಯರಿಗೆ ಕಾನೂನುಗಳನ್ನ ರೂಪಿಸಿ ಕಟ್ಟುನಿಟ್ಟಿನ ಕಾನೂನುಗಳ ಅಡಿಯಲ್ಲಿ ದೇಶ ಮುನ್ನಡೆಯಲು ಡಾ. ಬಿಆರ್ ಅಂಬೇಡ್ಕರ್ ಅವರು ಸಂವಿಧಾನವನ್ನು ರಚನೆ ಮಾಡಿದ್ದು ದಲಿತರಿಗೆ ಮೀಸಲಾಗಿರುವಂತಹ ಕಾನೂನುಗಳು ಇಂದು ದುರ್ಬಳಕೆ ಯಾಗುತ್ತಿವೆ ಎಂದು ಜಿ. ಪಂ. ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ವೈ.ಹೆಚ್. ಹುಚ್ಚಯ್ಯ ಅವರು ಕಳವಳ ವ್ಯಕ್ತಪಡಿಸಿದ್ದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಇರುವ ಗುಂಚಿ ವೃತ್ತದಲ್ಲಿ ಜಿಲ್ಲಾ ದಲಿತ ಜಲಾಂದೋಲನ ಸಮಿತಿಯವರು ಹಮ್ಮಿಕೊಂಡಿದ್ದ ಡಾ. ಬಿಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರ ಜಯಂತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಸವ ಬುದ್ಧ ಕನಕದಾಸ ಸೇರಿದಂತೆ ಮಹನೀಯರ ಜಯಂತಿಗಳು ಮಾಡುವಾಗ ಕೇವಲ ಅವರ ಸಮುದಾಯದವರು ಮಾತ್ರ ಸೇರುತ್ತಾರೆ ಅದೇ ರೀತಿಯಾಗಿ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್ ಅವರ ಜಯಂತೋತ್ಸವಕ್ಕೆ ಕೇವಲ ದಲಿತರು ಶೋಷಿತರು ಮಾತ್ರ ಇರುತ್ತಾರೆ ಆದರೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಕಟ್ಟಳೆಗಳ ಅಡಿಯಲ್ಲಿ ಎಲ್ಲರೂ ಬದುಕುತ್ತಿದ್ದಾರೆ ಅವರ ಜಯಂತಿಗಳು ಆದರ್ಶಗಳನ್ನು ಯಾರು ಪಾಲನೆ ಮಾಡದಿರುವುದು ದುರಂತವೇ ಸರಿ ಅಂಬೇಡ್ಕರ್ ಅವರು ವಿಶ್ವಜ್ಞಾನಿ ಇಂತಹ ತತ್ತಾದರ್ಶ ಪುರುಷರ ವಿಚಾರಗಳು ಹೊರಹೊಮ್ಮುವ ಜಯಂತಿಗಳಿಗೆ ಎಲ್ಲಾ ಸೇರುವುದು ಆದ್ಯ ಕರ್ತವ್ಯ ಎಂದರು.